Friday, November 5, 2010

ನನ್ನ ಮೊದಲ ಪ್ರೇಮ ಪತ್ರ..12

ದೀಪಗನ್ನಿನವಳೇ ..........


           ನಾನು ನಿನ್ನ ಜೀವನದಲ್ಲಿ ದೀಪ ಹಚ್ಚಲಿಕ್ಕೆ ಬಂದಿದೀನಿ...ಅದಕ್ಕೆ ಪ್ರೀತಿ ಎಂಬ ಎಣ್ಣೆ ಸುರಿಸಿ ಬೆಳಗುವಂತೆ ಮಾಡು 
ಆರಿಸಲು ಪ್ರಯತ್ನಿಸದಿರು ..

              ನಿನ್ನ ಉತ್ತರಕ್ಕೆ ಕಾಯ್ತಾ ಇರ್ತೀನಿ ಕಣೆ.....

                                                                            ಕೇವಲ ನಿನ್ನವನು..........


ಮುಕ್ತಾಯ ...

ನನ್ನ ಮೊದಲ ಪ್ರೇಮ ಪತ್ರ..11

ಗೆಳತಿ .....

     ಬಿಸಿಲಿನಿಂದ ಬಂದಾಗ ಅದೆಷ್ಟು ಕೆಂಪಾಗಿರ್ತೀಯೇ ಹುಡುಗಿ....ಹಾಗೆ ಓಡೋಡಿ ಬಂದು ಒಂದು ಸಲ ಕೆನ್ನೆ ಸವರಿ ಬಿಡುವ ಅನ್ನಿಸುತ್ತೆ ;   ಆಹಾ ಎಂಥ ಹಾಲು ಬಿಳುಪೆ ನಿಂದು..! 

            " ನಿಜ ಹೇಳಲಾ ಚಿನ್ನ .....
              ಆಕಾಶದ ನಕ್ಷತ್ರಗಳೆಂದರೆ ನನಗೆ ಹುಚ್ಚು 
              ಇನ್ನೂ ನಿಜ ಹೇಳಬೇಕೆಂದರೆ 
              ಅವ್ಯಾವುದು ನಿನ್ನ ಒಂದು ಕಣ್ಣಿಗೂ ಸಮವಲ್ಲ ಬಿಡು.."




                                                                       ಮುಂದುವರೆಯುತ್ತದೆ...

ನನ್ನ ಮೊದಲ ಪ್ರೇಮ ಪತ್ರ.10

ಪ್ರಿಯೆ ....

      ನಕ್ಷತ್ರಗಳನ್ನು ಎಣಿಸಿ ಎಣಿಸಿ ಸೋತವನು ನಾನು , ಆಕಾಶ ಎಟುಕಿಸಲು ಹೋಗಿ ನಿರಾಶೆಗೊಂಡವನು ನಾನು , ನದಿ 
ದಡದಲ್ಲಿ ಕುಳಿತು ಪುಟ್ಟ ದೋಣಿಗಾಗಿ ಹಂಬಲಿಸಿದವನು  ನಾನು ....
      ಇಂತವನ ಹ್ರದಯದಲ್ಲೂ ಹನಿ ಪ್ರೀತಿ ಹುಟ್ಟಿಸಿದ ಕೀರ್ತಿ ಮಾತ್ರ ನಿನಗೆ ಕಣೆ ;

    " ಪ್ರೀತಿನ ಪ್ರೀತಿಯಿಂದ ಪ್ರಿತಿಸೆ ಹುಡುಗಿ.."




                                                                          ಮುಂದುವರೆಯುತ್ತದೆ...

ನನ್ನ ಮೊದಲ ಪ್ರೇಮ ಪತ್ರ..9

ಪ್ರೀತಿಯ ಹುಡುಗಿ...

         ಈ ಹಾಳು ಕಣ್ಣುಗಳಿಗೆ , ಮನಸ್ಸಿಗೆ ನೀನೆ ಯಾಕೆ ಇಷ್ಟವಾಗಬೇಕೋ ಗೊತ್ತಿಲ್ಲ , ಆ ನಿನ್ನ ಹಾರುವ ಕೂದಲು , ನಡೆಯುವ ರೀತಿ , ನಿನ್ನ  ಗುಲಾಬಿ ಎಸಳಿನಂತಹ ತುಟಿಗಳ ನಡುವಿನಿಂದ ಸೂಸುವ ಮುಗುಳುನಗು , ಆ ನಿನ್ನ ಇಂಪಾದ ದನಿ , ಮಾತನಾಡುವ ರೀತಿ , ನಿನ್ನ ನಯ-ವಿನಯ ,  ಪ್ರೀತಿ - ಅಕ್ಕರೆ , ಮಮತೆ , ಆ ನಿನ್ನ ಕಣ್ಣ ಭಾಷೆ , ಎಲ್ಲ ತುಂಬಾ ಇಷ್ಟವಾಗೊಯ್ತು ಕಣೆ ..!  ನಿನಗೆ ಸೋತೋದೆ ಕಣೆ ಹುಡುಗಿ.....






                                                                                                                       ಮುಂದುವರೆಯುತ್ತದೆ....

ನನ್ನ ಮೊದಲ ಪ್ರೇಮ ಪತ್ರ..8

 ಗೆಳತಿ...

     ನೀ ನನ್ನ ಪ್ರೀತಿಸದಿದ್ದರೆ  ನಾ ಕಳೆದುಕೊಳ್ಳುವುದು ನನ್ನ ಪ್ರೀತಿಸದ ಒಂದು ಜೀವವನ್ನು ; ಆದರೆ ನೀನು ಕಳೆದುಕೊಳ್ಳುವುದು ನಿನ್ನನ್ನು ತುಂಬಾ ಪ್ರೀತಿಸುವ ಒಂದು ಜೀವವನ್ನು....

      ಈ ಜೀವ ನಿನಗೋಸ್ಕರ ನಿರ್ವಂಚನೆಯಿಂದ ಕಾಯುತ್ತಿದೆ; ಅದಕ್ಕೆ ವಂಚನೆ ಆಗದಂತೆ  ನೋಡಿಕೊ....








                                                                                                                               ಮುಂದುವರೆಯುತ್ತದೆ....

Monday, November 1, 2010

ನನ್ನ ಮೊದಲ ಪ್ರೇಮ ಪತ್ರ..7

ಗೆಳತಿ....
    
         ನಿನ್ನ ಸುಖ-ದುಃಖ, ಕಷ್ಟ - ಸುಖ , ಏಳು - ಬೀಳು ,ನೋವು - ನಲಿವುಗಲೆಲ್ಲದರಲ್ಲೂ ನನ್ನು ಭಾಗಿಯಗ್ತಿನಿ ಗೆಳತಿ, 
ನೀನ ಪ್ರತಿ ಹೆಜ್ಜೆ , ಪ್ರತಿ ಉಸಿರು, ಪ್ರತಿ ಉಚ್ವಾಸ - ನಿಶ್ವಾಸಗಳಲ್ಲಿ ನಾನಿರ್ತೀನಿ ಗೆಳತಿ. ನನ್ನ ಕಣ್ಣ ತೆರೆದಾಗ ನಿನ್ನ ಚಿತ್ರವಿರುತ್ತದೆ ಗೆಳತಿ , ನಿನ್ನ ತುಂಬಾ ಪ್ರೀತಿಸ್ತೀನಿ ಹುಡುಗಿ....



                                                                                                                ಮುಂದುವರೆಯುತ್ತದೆ....

ನನ್ನ ಮೊದಲ ಪ್ರೇಮ ಪತ್ರ..6

ಪ್ರೀತಿಯ ಹುಡುಗಿ....
  
              ನಾನು ತುಂಬಾ ತುಂಟ , ಪೆದ್ದ., ಮೂಡಿ..ಯಾರು ಏನೇ ಹೇಳಿದರು ಬದಲಾಗದ ಮೊಂಡ..
ನನ್ನನ್ನು ಕೊನೆತನಕ ಕೈ ಹಿಡಿದು ನಡೆಸುತ್ತಿಯಾ..? ಒಂದು ಬರವಸೆ ಕೊಡು ಸಾಕು ; ಪ್ರೀತಿಸೋದು ಅಂದ್ರೆ ಏನು ಅಂತ ತೋರಿಸ್ತೀನಿ.
              ನಾನು ನೋಡಲು ದುರ್ಬಲನಾಗಿ ಕಂಡರೂ, ನನ್ನ  ಪ್ರೀತಿಗೆ ಯಾವುದೇ ದೌರ್ಬಲ್ಲ್ಯಗಳಿಲ್ಲ. ಬಾಹ್ಯವಾಗಿ ಸ್ವಲ್ಪ ಕಪ್ಪಗಿದ್ದರು ಆಂತರಿಕವಾಗಿ ಯಾವುದೇ ಕಪ್ಪು ಛಾಯೆಗಲಿಲ್ಲ, ನಿಜ ಹೇಳ್ತೀನಿ ಹುಡುಗಿ, ಈ ಪ್ರಪಂಚದಲ್ಲಿ ನನಗಿಂತ ಸುಂದ್ರವಾಗಿರುವವನು, ನನಗಿಂತ ಸುಖವಾಗಿ ನಿನ್ನನ್ನು ಇದಬಲ್ಲವನು ಮತ್ತೊಬ್ಬ ಸಿಕ್ಕಾನು , ಆದರೆ ಗೆಳತಿ... ನಿನ್ನಂಥ ಹುಡುಗಿಯೊಬ್ಬಳು ಯಾರನ್ನಾದರೂ ಸುಖವಾಗಿಡಬೇಕು ಅಂತಾದರೆ ಅದು ನಾನೇ ಆಗಬೇಕು...




                                                                                                                 ಮುಂದುವರೆಯುತ್ತದೆ....

Saturday, September 25, 2010

ಗೆಳತಿ....

     " ನೀನು ನನ್ನವಳೇ ಆಗಿಲ್ಲ 
           ಆದರೂ, ನೀ ಕಳೆದು ಹೋಗುತ್ತೀಯ 
                 ಎಂದು ನಾನೇಕೆ ಭಯಪದುತ್ತೇನೆ...?

     ನೀನು ನನ್ನ ಪ್ರೀತಿಸುತ್ತಲೇ ಇಲ್ಲ 
           ಆದರೂ , ನಾನೇಕೆ ನಿನ್ನನ್ನು 
                ಅಷ್ಟೊಂದು ಇಷ್ಟಪಡುತ್ತೇನೆ..?

      ನೀನು ನನ್ನನ್ನು ಯಾರೋ ಒಬ್ಬ ಎಂದುಕೊಂಡಿರುವಾಗ
          ನಾನೇಕೆ ನಿನ್ನನ್ನು ನನ್ನವಳೇ 
               ಎಂದು ಭಾವಿಸಿದ್ದೇನೆ...?  "

ನನ್ನ ಮೊದಲ ಪ್ರೇಮ ಪತ್ರ..5

         ಅದೆಲ್ಲಕ್ಕಿಂತ ಹೆಚ್ಚಾಗಿ ಗೆಳತಿ..ನಿನಗೆ ನನಗಿಂತ ದೊಡ್ಡ ಕನಸುಗಾರ ಇನ್ನೊಬ್ಬ ಸಿಗಲಾರ ಖಂಡಿತವಾಗಿ . ಯಾಕಂದ್ರೆ ಅವರೆಲ್ಲ ರಾತ್ರೆ ಮಲಗುವಾಗ ನನ್ನ ಹುಡುಗಿ ಕನಸಿನಲ್ಲಿ ಬರಲಿ ಅಂತ ವಿನಂತಿಸಿಕೊಂಡು  ಮಲಗುತ್ತಾರೆ..ಆದರೆ ನಾನು ಮಾತ್ರ ಹಾಗಲ್ಲ ಕಣೆ ;
       ಕನಸಿಗೆ ಬಂದ ಹುಡುಗಿ ದಾರಿ ಗೊತ್ತಾಗದೆ ಕಳೆದು ಹೊದಾಳು ಎಂಬ ಭಯಕ್ಕೆ ಬಿದ್ದು ಕನಸಿನ ಕಿಟಕಿಯಲ್ಲಿ ಕುಳಿತು ರಾತ್ರಿಯಿಡಿ ನಿದ್ದೆಗೆಡುತ್ತೇನೆ. 

         ರಾತ್ರಿಯ ಏಕಾಂತದಲ್ಲಿ ದಿಂಬಿಗೆ ಕೆನ್ನೆಒತ್ತಿ ನಿದ್ದೆಗೊಂದು ಆಲಿಂಗನ ಅರ್ಪಿಸುವಾಗ ಗೆಳತಿ, ಸುಮ್ಮನೆ ನನ್ನನ್ನೊಮ್ಮೆ ನೆನಪು ಮಾಡಿಕೋ ಸಾಕು , ನನ್ನ ಉಳಿದ ಆಯುಷ್ಯವನ್ನಷ್ಟು ನಿನಗೆ ಸುರಿದು ಸುಮ್ಮನಾಗಿ ಬಿಡುತ್ತೇನೆ....

ಮುಂದುವರೆಯುತ್ತದೆ.....

ನನ್ನ ಮೊದಲ ಪ್ರೇಮ ಪತ್ರ..4

            ಕಥೆಗಳು ಮುಗಿದು , ಹಾಡುಗಳು ಹಳೆಯದಾಗಿ, ನೆನಪುಗಳು ಮಕಾಡೆ ಮಲಗಿ, ಇನ್ನೇನು ಎಲ್ಲ ಮುಗಿಯಿತು ಅನ್ನುವಾಗ ನಿನೋಬ್ಳು ನೆನಪಾಗ್ತೀಯ ಕಣೆ ; 

" ನನ್ನ ಜೀವದ ಭಾವ ನೀನು , ಆ ಭಾವದ ಆರಾಧಕ ನಾನು.."
       ಗೆಳತಿ..
            " ನೀನಿಲ್ಲದೆ ನಾನು incomplete  ಕಣೆ  "


ಮುಂದುವರೆಯುತ್ತದೆ..... 

ನನ್ನ ಮೊದಲ ಪ್ರೇಮ ಪತ್ರ..3

      ಮತ್ತೆ ನಿನ್ನ ನೋಡ್ತಿನೋ ಇಲ್ವೋ ಅಂದ್ಕೊಂಡಿದ್ದೆ; ನೀನು ಕಾಲೇಜ್ ಮುಗಿಸಿ ಹೋದಮೇಲೆ , 
ಮತ್ತೆ ನೀನು ಬಂದೆ..ನಿನ್ನ ನೋಡಿದಾಗ ಒಂದು ತುಂಬು ಬೆಳದಿಂಗಳು ಎಲ್ಲಿಂದಲೋ ಬಂದು ಕೆನ್ನೆ ಸವರಿ 
ಹಲೋ ಅಂದಂತಾಯಿತು. ನಿನ್ನ ಮತ್ತೆ ನೋಡಿದ ಮೇಲೆ ಏನು ಅನ್ನಿಸ್ತು ಗೊತ್ತಾ..!
" ಒಂದು ದೇವಲೋಕದ ಸೇವಂತಿಗೆ ಹೂವು ಏಕೋ ಮನಸ್ಸು ಮಾಡಿ ಸೂರ್ಯ ಉದಯಿಸುವ ಹೊತ್ತಿಗೆ ಭೂಲೋಕಕ್ಕೆ 
ಬಂದಂಗೆ ಕಾಣ್ತಿದ್ದೆ..."

         ಮುಂದುವರೆಯುತ್ತದೆ.....

Saturday, September 4, 2010

ನನ್ನ ಮೊದಲ ಪ್ರೇಮ ಪತ್ರ...2

ಪ್ರೀತಿಯ ಹುಡುಗಿ...

        ಒಂಚೂರು ಕೈಚಾಚು, ನಿನ್ನ ಅಂಗೈ ಮಿದುವಿನೊಳಕ್ಕೆ ನನ್ನ ಬದುಕನ್ನು, ಬರಲಿರುವ ನೂತನ ವರ್ಷದ ಉನ್ಮಾದವನ್ನು, ನನ್ನ ಸಮಸ್ತ ಪ್ರೀತಿ ಮತ್ತು ಆಖಾನ್ಕ್ಷೆಗಳೊಂದಿಗೆ ತೋಯಿಸಿ ಪುಟ್ಟದೊಂದು ಮ್ರದುವಾದ ಮುದ್ದೆ ಮಡಿ ಇರಿಸುತ್ತೇನೆ.

ಬಾನ ಹಕ್ಕಿ ಹಾಡುವ ವೇಳೆ...
    ಉದಯ ರವಿಯು ಮೂಡುವ ವೇಳೆ...
ನೀ ಬರುವ ಹಾದಿಯಲ್ಲಿ...
   ಹ್ರದಯ  ಹಾಸಿ ನಿಲ್ಲುವೆ ಗೆಳತಿ...! 


ಮುಂದುವರೆಯುತ್ತದೆ.....

Sunday, August 29, 2010

ಪ್ರೀತಿ...

" ಎಲ್ಲೈ ಹುಡುಗಿ...
ಮೆಲ್ಲಗೆ ನಿ ಬಂದು ನನ್ನ ಮನ ಮುಟ್ಟಿದೆ ; 
ನಲ್ಲನ ಈ ದೇಹ ಝಾಲ್ಲೆನ್ನದೆ..." 

ನನ್ನ ಮೊದಲ ಪ್ರೇಮ ಪತ್ರ...1

ದೀಪಗಣ್ಣಿನ ಹುಡುಗಿ...
          ಚೆನ್ನಾಗಿದ್ದೀಯಾ ..? ಸುಂದರವಾಗಿದ್ದಿಯಾ ಅಂತ ಗೊತ್ತು, ನಿಜ ಸಂಗತಿ ಹೇಳು...ಮನಸ್ಸು ಹೇಗಿದೆ..?
ತುಂಬಾ ಮಾತನಾಡುವವಳಲ್ಲಾ ನೀನು ; ನನ್ನ ಜೊತೆ ಮಾತ್ರ. ನೀನ ಮೌನಕ್ಕೆ ಕೊಲ್ಲುವುದು ಗೊತ್ತು,ನಿನ್ನ ಪರಿಚಯವೇ ಇಲ್ಲ ಎಂಬಂತೆ ನಿರ್ದಯಿಯಾಗಿರುವುದು ಗೊತ್ತು.ನಿನ್ನ ದೀಪಗಣ್ಣಿನ ನಡುವೆ ಅದೆಂಥ ಕತ್ತಲನ್ನಾದರೂ ಸಹ ಅಡಗಿಸಿಕೊಲ್ಲಬಲ್ಲೇ  ಅಂತ ಕೂಡ ಗೊತ್ತು. ಆದರೆ,  ನಿನ್ನ ದೀಪದಂತ ಕಣ್ಣುಗಳಲ್ಲಿ  ಒಂದೇ ಒಂದು ಬೆಳಕಿನ ಕಿರಣ ಕಾಣಲೆಂದು ಬಂದವನು ನಾನು. ಏಕೆಂದರೆ ನಿನ್ನ ಕಣ್ಣ ತಿರುವಿನಲ್ಲಿ ಬೆಳಕು ಎಲ್ಲಿಯಾದರೂ ಸಿಕ್ಕಿತು ಎಂಬ ಆಸೆಇಂದ....!




ಮುಂದುವರೆಯುತ್ತದೆ.. ...