Friday, November 5, 2010

ನನ್ನ ಮೊದಲ ಪ್ರೇಮ ಪತ್ರ..12

ದೀಪಗನ್ನಿನವಳೇ ..........


           ನಾನು ನಿನ್ನ ಜೀವನದಲ್ಲಿ ದೀಪ ಹಚ್ಚಲಿಕ್ಕೆ ಬಂದಿದೀನಿ...ಅದಕ್ಕೆ ಪ್ರೀತಿ ಎಂಬ ಎಣ್ಣೆ ಸುರಿಸಿ ಬೆಳಗುವಂತೆ ಮಾಡು 
ಆರಿಸಲು ಪ್ರಯತ್ನಿಸದಿರು ..

              ನಿನ್ನ ಉತ್ತರಕ್ಕೆ ಕಾಯ್ತಾ ಇರ್ತೀನಿ ಕಣೆ.....

                                                                            ಕೇವಲ ನಿನ್ನವನು..........


ಮುಕ್ತಾಯ ...

ನನ್ನ ಮೊದಲ ಪ್ರೇಮ ಪತ್ರ..11

ಗೆಳತಿ .....

     ಬಿಸಿಲಿನಿಂದ ಬಂದಾಗ ಅದೆಷ್ಟು ಕೆಂಪಾಗಿರ್ತೀಯೇ ಹುಡುಗಿ....ಹಾಗೆ ಓಡೋಡಿ ಬಂದು ಒಂದು ಸಲ ಕೆನ್ನೆ ಸವರಿ ಬಿಡುವ ಅನ್ನಿಸುತ್ತೆ ;   ಆಹಾ ಎಂಥ ಹಾಲು ಬಿಳುಪೆ ನಿಂದು..! 

            " ನಿಜ ಹೇಳಲಾ ಚಿನ್ನ .....
              ಆಕಾಶದ ನಕ್ಷತ್ರಗಳೆಂದರೆ ನನಗೆ ಹುಚ್ಚು 
              ಇನ್ನೂ ನಿಜ ಹೇಳಬೇಕೆಂದರೆ 
              ಅವ್ಯಾವುದು ನಿನ್ನ ಒಂದು ಕಣ್ಣಿಗೂ ಸಮವಲ್ಲ ಬಿಡು.."




                                                                       ಮುಂದುವರೆಯುತ್ತದೆ...

ನನ್ನ ಮೊದಲ ಪ್ರೇಮ ಪತ್ರ.10

ಪ್ರಿಯೆ ....

      ನಕ್ಷತ್ರಗಳನ್ನು ಎಣಿಸಿ ಎಣಿಸಿ ಸೋತವನು ನಾನು , ಆಕಾಶ ಎಟುಕಿಸಲು ಹೋಗಿ ನಿರಾಶೆಗೊಂಡವನು ನಾನು , ನದಿ 
ದಡದಲ್ಲಿ ಕುಳಿತು ಪುಟ್ಟ ದೋಣಿಗಾಗಿ ಹಂಬಲಿಸಿದವನು  ನಾನು ....
      ಇಂತವನ ಹ್ರದಯದಲ್ಲೂ ಹನಿ ಪ್ರೀತಿ ಹುಟ್ಟಿಸಿದ ಕೀರ್ತಿ ಮಾತ್ರ ನಿನಗೆ ಕಣೆ ;

    " ಪ್ರೀತಿನ ಪ್ರೀತಿಯಿಂದ ಪ್ರಿತಿಸೆ ಹುಡುಗಿ.."




                                                                          ಮುಂದುವರೆಯುತ್ತದೆ...

ನನ್ನ ಮೊದಲ ಪ್ರೇಮ ಪತ್ರ..9

ಪ್ರೀತಿಯ ಹುಡುಗಿ...

         ಈ ಹಾಳು ಕಣ್ಣುಗಳಿಗೆ , ಮನಸ್ಸಿಗೆ ನೀನೆ ಯಾಕೆ ಇಷ್ಟವಾಗಬೇಕೋ ಗೊತ್ತಿಲ್ಲ , ಆ ನಿನ್ನ ಹಾರುವ ಕೂದಲು , ನಡೆಯುವ ರೀತಿ , ನಿನ್ನ  ಗುಲಾಬಿ ಎಸಳಿನಂತಹ ತುಟಿಗಳ ನಡುವಿನಿಂದ ಸೂಸುವ ಮುಗುಳುನಗು , ಆ ನಿನ್ನ ಇಂಪಾದ ದನಿ , ಮಾತನಾಡುವ ರೀತಿ , ನಿನ್ನ ನಯ-ವಿನಯ ,  ಪ್ರೀತಿ - ಅಕ್ಕರೆ , ಮಮತೆ , ಆ ನಿನ್ನ ಕಣ್ಣ ಭಾಷೆ , ಎಲ್ಲ ತುಂಬಾ ಇಷ್ಟವಾಗೊಯ್ತು ಕಣೆ ..!  ನಿನಗೆ ಸೋತೋದೆ ಕಣೆ ಹುಡುಗಿ.....






                                                                                                                       ಮುಂದುವರೆಯುತ್ತದೆ....

ನನ್ನ ಮೊದಲ ಪ್ರೇಮ ಪತ್ರ..8

 ಗೆಳತಿ...

     ನೀ ನನ್ನ ಪ್ರೀತಿಸದಿದ್ದರೆ  ನಾ ಕಳೆದುಕೊಳ್ಳುವುದು ನನ್ನ ಪ್ರೀತಿಸದ ಒಂದು ಜೀವವನ್ನು ; ಆದರೆ ನೀನು ಕಳೆದುಕೊಳ್ಳುವುದು ನಿನ್ನನ್ನು ತುಂಬಾ ಪ್ರೀತಿಸುವ ಒಂದು ಜೀವವನ್ನು....

      ಈ ಜೀವ ನಿನಗೋಸ್ಕರ ನಿರ್ವಂಚನೆಯಿಂದ ಕಾಯುತ್ತಿದೆ; ಅದಕ್ಕೆ ವಂಚನೆ ಆಗದಂತೆ  ನೋಡಿಕೊ....








                                                                                                                               ಮುಂದುವರೆಯುತ್ತದೆ....

Monday, November 1, 2010

ನನ್ನ ಮೊದಲ ಪ್ರೇಮ ಪತ್ರ..7

ಗೆಳತಿ....
    
         ನಿನ್ನ ಸುಖ-ದುಃಖ, ಕಷ್ಟ - ಸುಖ , ಏಳು - ಬೀಳು ,ನೋವು - ನಲಿವುಗಲೆಲ್ಲದರಲ್ಲೂ ನನ್ನು ಭಾಗಿಯಗ್ತಿನಿ ಗೆಳತಿ, 
ನೀನ ಪ್ರತಿ ಹೆಜ್ಜೆ , ಪ್ರತಿ ಉಸಿರು, ಪ್ರತಿ ಉಚ್ವಾಸ - ನಿಶ್ವಾಸಗಳಲ್ಲಿ ನಾನಿರ್ತೀನಿ ಗೆಳತಿ. ನನ್ನ ಕಣ್ಣ ತೆರೆದಾಗ ನಿನ್ನ ಚಿತ್ರವಿರುತ್ತದೆ ಗೆಳತಿ , ನಿನ್ನ ತುಂಬಾ ಪ್ರೀತಿಸ್ತೀನಿ ಹುಡುಗಿ....



                                                                                                                ಮುಂದುವರೆಯುತ್ತದೆ....

ನನ್ನ ಮೊದಲ ಪ್ರೇಮ ಪತ್ರ..6

ಪ್ರೀತಿಯ ಹುಡುಗಿ....
  
              ನಾನು ತುಂಬಾ ತುಂಟ , ಪೆದ್ದ., ಮೂಡಿ..ಯಾರು ಏನೇ ಹೇಳಿದರು ಬದಲಾಗದ ಮೊಂಡ..
ನನ್ನನ್ನು ಕೊನೆತನಕ ಕೈ ಹಿಡಿದು ನಡೆಸುತ್ತಿಯಾ..? ಒಂದು ಬರವಸೆ ಕೊಡು ಸಾಕು ; ಪ್ರೀತಿಸೋದು ಅಂದ್ರೆ ಏನು ಅಂತ ತೋರಿಸ್ತೀನಿ.
              ನಾನು ನೋಡಲು ದುರ್ಬಲನಾಗಿ ಕಂಡರೂ, ನನ್ನ  ಪ್ರೀತಿಗೆ ಯಾವುದೇ ದೌರ್ಬಲ್ಲ್ಯಗಳಿಲ್ಲ. ಬಾಹ್ಯವಾಗಿ ಸ್ವಲ್ಪ ಕಪ್ಪಗಿದ್ದರು ಆಂತರಿಕವಾಗಿ ಯಾವುದೇ ಕಪ್ಪು ಛಾಯೆಗಲಿಲ್ಲ, ನಿಜ ಹೇಳ್ತೀನಿ ಹುಡುಗಿ, ಈ ಪ್ರಪಂಚದಲ್ಲಿ ನನಗಿಂತ ಸುಂದ್ರವಾಗಿರುವವನು, ನನಗಿಂತ ಸುಖವಾಗಿ ನಿನ್ನನ್ನು ಇದಬಲ್ಲವನು ಮತ್ತೊಬ್ಬ ಸಿಕ್ಕಾನು , ಆದರೆ ಗೆಳತಿ... ನಿನ್ನಂಥ ಹುಡುಗಿಯೊಬ್ಬಳು ಯಾರನ್ನಾದರೂ ಸುಖವಾಗಿಡಬೇಕು ಅಂತಾದರೆ ಅದು ನಾನೇ ಆಗಬೇಕು...




                                                                                                                 ಮುಂದುವರೆಯುತ್ತದೆ....