Saturday, September 25, 2010

ಗೆಳತಿ....

     " ನೀನು ನನ್ನವಳೇ ಆಗಿಲ್ಲ 
           ಆದರೂ, ನೀ ಕಳೆದು ಹೋಗುತ್ತೀಯ 
                 ಎಂದು ನಾನೇಕೆ ಭಯಪದುತ್ತೇನೆ...?

     ನೀನು ನನ್ನ ಪ್ರೀತಿಸುತ್ತಲೇ ಇಲ್ಲ 
           ಆದರೂ , ನಾನೇಕೆ ನಿನ್ನನ್ನು 
                ಅಷ್ಟೊಂದು ಇಷ್ಟಪಡುತ್ತೇನೆ..?

      ನೀನು ನನ್ನನ್ನು ಯಾರೋ ಒಬ್ಬ ಎಂದುಕೊಂಡಿರುವಾಗ
          ನಾನೇಕೆ ನಿನ್ನನ್ನು ನನ್ನವಳೇ 
               ಎಂದು ಭಾವಿಸಿದ್ದೇನೆ...?  "

ನನ್ನ ಮೊದಲ ಪ್ರೇಮ ಪತ್ರ..5

         ಅದೆಲ್ಲಕ್ಕಿಂತ ಹೆಚ್ಚಾಗಿ ಗೆಳತಿ..ನಿನಗೆ ನನಗಿಂತ ದೊಡ್ಡ ಕನಸುಗಾರ ಇನ್ನೊಬ್ಬ ಸಿಗಲಾರ ಖಂಡಿತವಾಗಿ . ಯಾಕಂದ್ರೆ ಅವರೆಲ್ಲ ರಾತ್ರೆ ಮಲಗುವಾಗ ನನ್ನ ಹುಡುಗಿ ಕನಸಿನಲ್ಲಿ ಬರಲಿ ಅಂತ ವಿನಂತಿಸಿಕೊಂಡು  ಮಲಗುತ್ತಾರೆ..ಆದರೆ ನಾನು ಮಾತ್ರ ಹಾಗಲ್ಲ ಕಣೆ ;
       ಕನಸಿಗೆ ಬಂದ ಹುಡುಗಿ ದಾರಿ ಗೊತ್ತಾಗದೆ ಕಳೆದು ಹೊದಾಳು ಎಂಬ ಭಯಕ್ಕೆ ಬಿದ್ದು ಕನಸಿನ ಕಿಟಕಿಯಲ್ಲಿ ಕುಳಿತು ರಾತ್ರಿಯಿಡಿ ನಿದ್ದೆಗೆಡುತ್ತೇನೆ. 

         ರಾತ್ರಿಯ ಏಕಾಂತದಲ್ಲಿ ದಿಂಬಿಗೆ ಕೆನ್ನೆಒತ್ತಿ ನಿದ್ದೆಗೊಂದು ಆಲಿಂಗನ ಅರ್ಪಿಸುವಾಗ ಗೆಳತಿ, ಸುಮ್ಮನೆ ನನ್ನನ್ನೊಮ್ಮೆ ನೆನಪು ಮಾಡಿಕೋ ಸಾಕು , ನನ್ನ ಉಳಿದ ಆಯುಷ್ಯವನ್ನಷ್ಟು ನಿನಗೆ ಸುರಿದು ಸುಮ್ಮನಾಗಿ ಬಿಡುತ್ತೇನೆ....

ಮುಂದುವರೆಯುತ್ತದೆ.....

ನನ್ನ ಮೊದಲ ಪ್ರೇಮ ಪತ್ರ..4

            ಕಥೆಗಳು ಮುಗಿದು , ಹಾಡುಗಳು ಹಳೆಯದಾಗಿ, ನೆನಪುಗಳು ಮಕಾಡೆ ಮಲಗಿ, ಇನ್ನೇನು ಎಲ್ಲ ಮುಗಿಯಿತು ಅನ್ನುವಾಗ ನಿನೋಬ್ಳು ನೆನಪಾಗ್ತೀಯ ಕಣೆ ; 

" ನನ್ನ ಜೀವದ ಭಾವ ನೀನು , ಆ ಭಾವದ ಆರಾಧಕ ನಾನು.."
       ಗೆಳತಿ..
            " ನೀನಿಲ್ಲದೆ ನಾನು incomplete  ಕಣೆ  "


ಮುಂದುವರೆಯುತ್ತದೆ..... 

ನನ್ನ ಮೊದಲ ಪ್ರೇಮ ಪತ್ರ..3

      ಮತ್ತೆ ನಿನ್ನ ನೋಡ್ತಿನೋ ಇಲ್ವೋ ಅಂದ್ಕೊಂಡಿದ್ದೆ; ನೀನು ಕಾಲೇಜ್ ಮುಗಿಸಿ ಹೋದಮೇಲೆ , 
ಮತ್ತೆ ನೀನು ಬಂದೆ..ನಿನ್ನ ನೋಡಿದಾಗ ಒಂದು ತುಂಬು ಬೆಳದಿಂಗಳು ಎಲ್ಲಿಂದಲೋ ಬಂದು ಕೆನ್ನೆ ಸವರಿ 
ಹಲೋ ಅಂದಂತಾಯಿತು. ನಿನ್ನ ಮತ್ತೆ ನೋಡಿದ ಮೇಲೆ ಏನು ಅನ್ನಿಸ್ತು ಗೊತ್ತಾ..!
" ಒಂದು ದೇವಲೋಕದ ಸೇವಂತಿಗೆ ಹೂವು ಏಕೋ ಮನಸ್ಸು ಮಾಡಿ ಸೂರ್ಯ ಉದಯಿಸುವ ಹೊತ್ತಿಗೆ ಭೂಲೋಕಕ್ಕೆ 
ಬಂದಂಗೆ ಕಾಣ್ತಿದ್ದೆ..."

         ಮುಂದುವರೆಯುತ್ತದೆ.....

Saturday, September 4, 2010

ನನ್ನ ಮೊದಲ ಪ್ರೇಮ ಪತ್ರ...2

ಪ್ರೀತಿಯ ಹುಡುಗಿ...

        ಒಂಚೂರು ಕೈಚಾಚು, ನಿನ್ನ ಅಂಗೈ ಮಿದುವಿನೊಳಕ್ಕೆ ನನ್ನ ಬದುಕನ್ನು, ಬರಲಿರುವ ನೂತನ ವರ್ಷದ ಉನ್ಮಾದವನ್ನು, ನನ್ನ ಸಮಸ್ತ ಪ್ರೀತಿ ಮತ್ತು ಆಖಾನ್ಕ್ಷೆಗಳೊಂದಿಗೆ ತೋಯಿಸಿ ಪುಟ್ಟದೊಂದು ಮ್ರದುವಾದ ಮುದ್ದೆ ಮಡಿ ಇರಿಸುತ್ತೇನೆ.

ಬಾನ ಹಕ್ಕಿ ಹಾಡುವ ವೇಳೆ...
    ಉದಯ ರವಿಯು ಮೂಡುವ ವೇಳೆ...
ನೀ ಬರುವ ಹಾದಿಯಲ್ಲಿ...
   ಹ್ರದಯ  ಹಾಸಿ ನಿಲ್ಲುವೆ ಗೆಳತಿ...! 


ಮುಂದುವರೆಯುತ್ತದೆ.....